ಕಲರವ

Archive for March 2008

ಹೌದು, ಫೆಬ್ರವರಿ ತಿಂಗಳ ಸಂಚಿಕೆಯನ್ನು ಹೊರತಂದ ದಣಿವು ಆರುವುದರೊಳಗೆ ಮನಸ್ಸು ಮಾರ್ಚ್ ತಿಂಗಳ ಸಂಚಿಕೆಯ ಅಡುಗೆ ಮಾಡಲು ಸಿದ್ಧವಾಗಿದೆ.
ಕಳೆದ ಸಂಚಿಕೆಯಲ್ಲಿ ಪ್ರೀತಿ ಅಂದರೇನು ಎನ್ನುವ ಎಂದೂ ಉತ್ತರ ಕಾಣಲು ಸಾಧ್ಯವಿಲ್ಲದ ಪ್ರಶ್ನೆಯನ್ನು ಬೆನ್ನತ್ತಿ ಹೋದ ನಮ್ಮ ಪ್ರಯತ್ನವನ್ನು ಮೆಚ್ಚಿ ಹಲವರು ಬೆನ್ನು ತಟ್ಟಿದ್ದಾರೆ. ಆ ಪ್ರೋತ್ಸಾಹದ ಹುಮ್ಮಸ್ಸಿನಲ್ಲಿ ಈ ಬಾರಿ ನಮ್ಮ ಮುಖಪುಟದ ಚರ್ಚೆಯ ವಿಷಯವಾಗಿ ಆರಿಸಿಕೊಂಡಿರುವುದು, ‘ಫ್ರೆಂಡ್ ಶಿಪ್’. ಏನೀ ಗೆಳೆತನದ ಗಮ್ಮತ್ತು? ಏನಿದರ ಮರ್ಮ? ನಾವೊಂದಿಷ್ಟು ಮಂದಿ ಗೆಳಯರು ಕಲೆತು ಚರ್ಚೆ ಮಾಡಿ [...]

ನಮ್ಮ ಪತ್ರಿಕೆಯ ಮುದ್ರಣ ಪ್ರತಿ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲವಿದೆಯೇ? ಮುದ್ದಾದ ಬ್ಲಾಗಿನ ಹಾಗೆಯೇ ಕಾಗದದ ಮೇಲೆ ಹೇಗೆ ಮುದ್ರಿತವಾಗುತ್ತದೆ ಎಂಬುದನ್ನು ತಿಳಿಯಬೇಕೆ ಹಾಗಾದರೆ ಈ ಕೊಂಡಿಯನ್ನು ಎಡತಾಕಿ. ಇಲ್ಲಿಂದ ನೀವು ‘ಸಡಗರ’ ಪತ್ರಿಕೆಯ ಫೆಬ್ರವರಿ ಸಂಚಿಕೆಯ ಪಿ.ಡಿ.ಎಫ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂದು ಓದಬಹುದು.
- ಸಂಪಾದಕ

Tags: ,

ಭಯೋತ್ಪಾದನೆ, ಭಯೋತ್ಪಾದಕ ಎಂಬ ಪತ್ರಿಕೆಗಳಲ್ಲಿ ಓದಿದ, ಸುದ್ದಿ ವಾಹಿನಿಗಳಲ್ಲಿ ಕೇಳಿದ ಪದಗಳು ನಮ್ಮ ಪಕ್ಕದಲ್ಲೇ ಕುಳಿತು ನಮ್ಮ ಕಿವಿಗಳೊಳಗೇ ಪಿಸುಗುಟ್ಟಿದ ಅನುಭವವಾಗುತ್ತಿದೆ. ದೂರದಲ್ಲೆಲ್ಲೋ ಅಲ್ಲ, ಇಲ್ಲೇ ನಮ್ಮ ದಾವಣಗೆರೆಯಲ್ಲಿ ಇಬ್ಬರು ಭಯೋತ್ಪಾದಕರು ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ನಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ನಡುವೆಯೇ ಭಯೋತ್ಪಾದನೆಯ ಬೀಜಗಳು ಮೊಳೆತಿರುವುದು ಬೆಳಕಿಗೆ ಬರುತ್ತಲಿದೆ. ನಮ್ಮ ಮಧ್ಯೆ ಓಡಾಡಿಕೊಂಡಿದ್ದ ವ್ಯಕ್ತಿಗಳು ನಮ್ಮ ನೆತ್ತರನ್ನು ನೆಲದ ಮೇಲೆ ಹರಿಸುವ ಹೊಂಚು ಹಾಕುತ್ತಿದ್ದುದನ್ನು ಅರಿಯದ ಹಾಗಿದ್ದ ನಮಗೀಗ ಬೆನ್ನ ಹುರಿಯಗಂಟ ನಡುಕ! ಹೌದು [...]

ದೂರದಲ್ಲೆಲ್ಲೋ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದೆ ಎಂದು ಕೇಳಿ ಬರುತ್ತಿದ್ದ ಭಯೋತ್ಪಾದನೆ, ಅಲ್ಲೆಲ್ಲೋ ಒರಿಸ್ಸಾ, ಗುಜರಾಥದಲ್ಲಿ ಬಂಧಿತರಾಗುತ್ತಿದ್ದ ಉಗ್ರರು, ಅಲ್ಲೆಲ್ಲೋ ಮುಂಬೈ, ಹೈದರಾಬಾದುಗಳ ಬಳಿಯಿಂದ ಕೇಳಿಬರುತ್ತಿದ್ದ ಬಾಂಬ್ ಸ್ಫೋಟದ ಸದ್ದು ಇದೀಗ ನೇರವಾಗಿ ನಮ್ಮ ನೆಲದೊಳಗಿಂದಲೇ ಕೇಳಿಬರಲಾರಂಭಿಸಿದೆ. ಮತ್ತೆ ಅದೇ ಬಗೆಯ ಪ್ರತಿಕ್ರಿಯೆಗಳು. ಮಾಧ್ಯಮಗಳ ರಂಜಿತ ವರದಿ, ರಾಜಕಾರಣಿಗಳ ‘ಬೆಣ್ಣೆಯಿಂದ ಕೂದಲು ತೆಗೆಯುವ’ ನಾಜೂಕಿನ ಉತ್ತರಗಳು, ಶಂಕರ್ ಬಿದರಿಯವರಂತಹ ಪೋಲೀಸರಿಂದಲೇ ತದ್ವಿರುದ್ಧವಾದ ಹೇಳಿಕೆಗಳು, ಬುದ್ಧಿಜೀವಿಗಳಲ್ಲಿ ಉಸಿರಾಡಿದರೂ ಕೇಳುವಂತಹ ಸಂಶಯಾಸ್ಪದವಾದ ಮೌನ! ಇವೆಲ್ಲಾ ಎಲ್ಲೋ ದೂರದಲ್ಲಿ ನಡೆಯುತ್ತಿದ್ದ ಹಾಗೆಯೇ ಇಲ್ಲೂ [...]

ನಮ್ಮಲ್ಲೇಕೆ ‘ತಾರೆ ಜಮೀನ್ ಪರ್’ ರೀತಿಯ ಸಿನೆಮಾಗಳಿಲ್ಲ? ನಾವ್ಯಾಕೆ ‘ಚಕ್ ದೇ’ ತರಹದ ಸಿನೆಮಾ ಮಾಡಲು ಮುಂದಾಗುವುದಿಲ್ಲ ಎಂದು ಹಲುಬುವವರಿಗೆ ಇಲ್ಲಿ ಉತ್ತರ ಕೊಟ್ಟಿದ್ದಾರೆ ‘ಚಿತ್ರ’.

ನೆಲಕ್ಕಿಳಿದ ತಾರೆ ಹಾಗೂ ಆಗಸಕ್ಕೆ ಹಾರಿದ ಗಾಳಿಪಟ!
ಹೌದು, ಅಕ್ಷರಶಃ ಈ ಶೀರ್ಷಿಕೆ ಕನ್ನಡ ಹಾಗೂ ಬಾಲಿವುಡ್ ಚಿತ್ರೋದ್ಯಮದ ಮನಸ್ಥಿತಿಗಳ ನಡುವಿನ ವ್ಯತ್ಯಾಸವನ್ನು ಬಿಂಬಿಸುತ್ತದೆ. ಆಕಾಶದಲ್ಲಿ ಹೊಳೆಯುವ ತಾರೆಯನ್ನು ವಾಸ್ತವದ ನೆಲದ ಮೇಲೆ ತರುವ ಪ್ರಯತ್ನ ಹಿಂದಿಯಲ್ಲಿ ಕಂಡು ಬಂದರೆ, ಕೇವಲ ಒಂದು ಎಳೆಯ ದಾರದ ಸೂತ್ರದ ಹಿಡಿತದಲ್ಲಿ ಗಾಳಿಪಟವನ್ನು ಆಗಸಕ್ಕೆ ಹಾರಿಬಿಡುವ [...]

Love: the essence of life

Posted by: uniquesupri on: March 7, 2008

The author of this piece is Manjunath.A.N

What is this life if , full of care,
We have no time to stand and stare?
Decades ago when W.H.Davies wrote these lines, he was probably worried about the gradual disappearance of love among humans for each other. If he had lived unto this day, he would have buried himself [...]

ಒಲವೆಂಬ ವಿಸ್ಮಯ!

Posted by: uniquesupri on: March 7, 2008

ಈ ಸಂಚಿಕೆಯ ಮುಖಪುಟ ಲೇಖನದ ಲೇಖಕರು ಸುಪ್ರೀತ್.ಕೆ.ಎಸ್

ಈ ಪ್ರೀತಿ ಅಂದರೆ ಏನು?ಹಾಗಂತ ಕೇಳಿ ನೋಡಿ ಪ್ರೀತಿಯಲ್ಲಿ ಬಿದ್ದವರಿಗೆ ಮಾತನಾಡಲು ಪದಗಳೇ ಸಿಕ್ಕುವುದಿಲ್ಲ. ಎಂದೂ ಪ್ರೀತಿಸಿರದವರಿಗೆ ಮಾತನಾಡಲಿಕ್ಕೆ, ವಾದಿಸುವುದಕ್ಕೆ ಸಾವಿರ ಸಾವಿರ ಸಂಗತಿಗಳು ಸಿಕ್ಕುತ್ತವೆ. ನೂರಾರು ಥಿಯರಿಗಳು ಕೈಗೆ ಎಟುಕುತ್ತವೆ. ಹತ್ತಾರು ಶ್ರೇಷ್ಠ ಚಿಂತಕರು ಹೇಳಿದ ಸಿದ್ಧಾಂತಗಳು ನೆರವಿಗೆ ಬರುತ್ತವೆ. ಆದರೆ ಪ್ರೀತಿಯಲ್ಲಿ ಮುಳುಗಿದವರನ್ನು ಕೇಳಿ, ಅವರಿಗೆ ಮಾತೇ ಬರದು, ಅವರು ಪ್ರೀತಿ ಕೊಡಮಾಡುವ ಮಧುರ ಅನುಭೂತಿಯನ್ನು ಸವಿಯುವುದರಲ್ಲಿ ಮಗ್ನರಾಗಿರುತ್ತಾರೆ, ಮಾತು ಮರೆತಿರುತ್ತಾರೆ.
ಧರ್ಮವೆಂದರೆ ಏನು, ದೇವರು ಇದ್ದಾನಾ? ಅಂತೆಲ್ಲಾ [...]

ಪ್ರೀತಿಯೆಂಬ ಆತ್ಮವಂಚನೆ

Posted by: uniquesupri on: March 7, 2008

ಈ ಬರಹದ ಲೇಖಕರು ‘ಅಂತರ್ಮುಖಿ’.

Love is only a dirty trick played on us to achieve continuation of the species.-W. Somerset Maugham
ಪ್ರಸ್ತುತ ನಮ್ಮ ಸುತ್ತಲಿರುವ ಮಾಧ್ಯಮಗಳ ಮನಸ್ಥಿತಿ, ನಮ್ಮ ಸಾಹಿತ್ಯ, ನಮ್ಮ ಸಿನೆಮಾಗಳಲ್ಲಿನ ಪ್ರೀತಿಯ ವೈಭವೀಕರಣವನ್ನು ಗಮನಿಸಿದರೆ, ನಿರ್ಭಾವುಕರಾಗಿ ಅವಲೋಕಿಸುವ ಪ್ರಯತ್ನ ಮಾಡಿದರೆ ‘ಹುಮನ್ ಬಾಂಡೇಜ್’ನಂತಹ ಶ್ರೇಷ್ಠ ಕೃತಿಯನ್ನು ರಚಿಸಿದ ಸೊಮರ್‍ಸೆಟ್ ಮಾಮ್‌ ಹೇಳಿದ ಈ ಮೇಲಿನ ಮಾತು ಎಷ್ಟು ಸಕಾಲಿಕವಾದದ್ದು ಹಾಗೂ ಸರ್ವಕಾಲೀನವಾದದ್ದು ಎಂಬುದರ ಅರಿವಾದೀತು.
ನಮ್ಮ ಬದುಕಿನಲ್ಲಿ ಏಕೆ ಬೇರಾವ [...]


Blog Stats

  • 13,245 hits

 

March 2008
M T W T F S S
« Feb   Apr »
 12
3456789
10111213141516
17181920212223
24252627282930
31