ಕಲರವ

Icon

ಇದು ಬ್ಲಾಗ್ ಲೋಕದ ‘ಸಡಗರ’!

‘ಕಲರವ’ದ ಪುಟಗಳಲ್ಲಿ ಒಲವೇ ವಿಸ್ಮಯ!

‘ಪ್ರೀತಿ ಮಾಯೆ ಹುಶಾರು’ ಅಂದವರಿದ್ದಾರೆ, ‘ಪ್ರೀತಿ ಬದುಕಿನ ನೆಲೆ’ ಅಂದವರಿದ್ದಾರೆ. ನಿಜಕ್ಕೂ ಈ ಪ್ರೀತಿ ಅಂದರೆ ಏನು? ಪ್ರೀತಿಯ ಅನುಭವ ಹೇಗಿರುತ್ತದೆ? ಪ್ರೀತಿ ಅಂತ ಮೂಗು ಮುರಿಯುವ ಹಿರಿಯರಿದ್ದಾರೆ. ಕಾಲ ಹಾಳಾಗಿ ಹೋಯ್ತು ಅಂತ ಗೊಣಗುವವರಿದ್ದಾರೆ. ಆದರೆ ಪ್ರೀತಿಗೆ ಕಾಲದ ಹಂಗಿಲ್ಲ. ನಮ್ಮ ತಾತ ಮುತ್ತಾತನ ಕಾಲದಲ್ಲೂ ಪ್ರೀತಿಯಿತ್ತು, ಪ್ರೀತಿಯಿಲ್ಲದೆ ಮನುಷ್ಯನ ಬದುಕಿಗೆ ಅರ್ಥವೇ ಇಲ್ಲವೇನೊ…

ಪ್ರೀತಿ ಅಂದರೆ ಕೇವಲ ವಯಸ್ಸಿಗೆ ಬಂದ ಹುಡುಗ ಹುಡುಗಿಯರ ನಡುವಿನ ಸಂಬಂಧ ಎಂದು ಭಾವಿಸಿದರೆ ನಾವು ಪ್ರೀತಿಯನ್ನು ವ್ಯಾಖ್ಯಾನಿಸುವಲ್ಲಿ ಸೋಲುತ್ತೇವೆ. ಮಮತೆ, ವಾಸ್ತಲ್ಯ, ಹೆಮ್ಮೆ, ಅಭಿಮಾನ, ದೇಶ ಭಕ್ತಿ, ದೈವ ಭಕ್ತಿ, ಪುಸ್ತಕ ಪ್ರೇಮ, ಸಹೃದಯತೆ ಅಂತೆಲ್ಲಾ ಯಾವ ಭಾವಗಳನ್ನು ಕರೆಯುತ್ತೇವೋ ಅವೆಲ್ಲಾ ಪ್ರೀತಿಯ ನದಿಯ ಹರಿವಿನ ಬೇರೆ ಬೇರೆ ಕವಲುಗಳು ಮಾತ್ರ. ಈ ಪ್ರೀತಿಯೆಂಬ ನದಿಯ ದಡದಲ್ಲಿ ಕುಳಿತು, ನದಿಯ ಆಳಕ್ಕೆ ಮುಳುಗಿ, ನದಿಯ ಮೇಲೆ ಹಾಯಿದೋಣಿಯಲ್ಲಿ ತೇಲಿದವರ ವ್ಯಾಖ್ಯಾನಗಳು ಈ ಸಂಚಿಕೆಯಲ್ಲಿ ಬರಹದ ರೂಪವನ್ನು ಪಡೆದುಕೊಂಡಿವೆ.

ಎಲ್ಲಾ ಹೇಳಿದ ನಂತರವೂ ಅಗೋಚರವಾಗಿ ಉಳಿವುದು ಪ್ರೀತಿ! ಒಲವೇ ವಿಸ್ಮಯ!

- ಸಾರಥಿ


Technorati : , , ,

Filed under: ಮಾತುಕತೆ

Leave a Reply

ಕನ್ನಡ ದಿನಪತ್ರಿಕೆಗಳು

ಕನ್ನಡ ನಿಯತಕಾಲಿಕೆಗಳು

ಕನ್ನಡ ಪೋರ್ಟಲ್‌ಗಳು

ಕನ್ನಡ ಸಾಮಗ್ರಿ

ಕನ್ನಡ ಹಾಡುಗಳು

ಕನ್ನಡದ ಬ್ಲಾಗುಗಳು

ಚಿತ್ರ ವಾರ್ತೆ