Posted by: uniquesupri on: February 27, 2008
ಓದು ಎನ್ನುವುದು ನಮ್ಮ ಜೀವನದಲ್ಲಿ ನಿರಂತರ ಪ್ರಕ್ರಿಯೆಯಾಗಿರಬೇಕು, ದಿನಾ ನೋಡುವ ಧಾರಾವಾಹಿಯಂತೆ. ಪುಸ್ತಕದ ಮೂಲಕ ನಾವು ಜಗತ್ತಿನ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಭೇಟಿ ಮಾಡುತ್ತೇವೆ. ಆತನನ್ನು ಮಾತನಾಡಿಸುತ್ತೇವೆ. ಆತ ಹೇಳುವುದನ್ನು ಕೇಳುತ್ತೇವೆ. ಆತನಿಗೆ ನಾವು ಹೇಳುವುದನ್ನು ಕೇಳು ಅನ್ನುತ್ತೇವೆ. ಆತನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತೇವೆ, ಪ್ರಶ್ನೆ ಮಾಡುತ್ತೇವೆ, ತಕರಾರು ಎತ್ತುತ್ತೇವೆ. ಆತನೊಂದಿಗೆ ಜಗಳ ಮಾಡುತ್ತೇವೆ, ರಾಜಿಯಾಗುತ್ತೇವೆ. ಕೋಪಿಸಿಕೊಂಡು ದೂರ ಮಾಡುತ್ತೇವೆ. ಅಪ್ಪಿ ಮುದ್ದಾಡುತ್ತೇವೆ. ಪ್ರೀತಿಯಿಂದ ಎದೆಗೊತ್ತಿಕೊಳ್ಳುತ್ತೇವೆ. ಯಾವ ಪೊಸೆಸೀವ್‌ನೆಸ್ ಇಲ್ಲದೆ ಆತನನ್ನು ಇನ್ನೊಬ್ಬರಿಗೆ ಪರಿಚಯ ಮಾಡಿಸಿಕೊಡುತ್ತೇವೆ. ಆತನಿಗೆ ಇವನನ್ನು [...]
Posted by: uniquesupri on: February 27, 2008
ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನ ಸಹಜವಾದ ಜೀವನೊಲ್ಲಾಸವನ್ನು ಕಟ್ಟಿಹಾಕುವ ಸೆರೆಮನೆ ಎಂದು ವಾದಿಸಿದ್ದಾರೆ ‘ಅಂತರ್ಮುಖಿ’.
ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?
ಮನುಷ್ಯ ನಿಸರ್ಗದಿಂದ ದೂರಾದ ಪ್ರಕ್ರಿಯೆಯ ಮೊದಲ ಹಂತವೇ ವ್ಯವಸ್ಥೆ. ಭೂಮಿಯ ಮೇಲಿನ ಸಕಲೆಂಟು ಜೀವ ಜಂತುಗಳು ಸಹಬಾಳ್ವೆಯಿಂದ ಜೀವಿಸುವುದಕ್ಕೆ ಪ್ರಕೃತಿ ತನ್ನದೇ ಆದ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕವಾದ ಅಸ್ತಿತ್ವವಿದೆ. ಅವಕ್ಕೆ ಪ್ರಕೃತಿ ಕೊಡಮಾಡಿದ ತಮ್ಮವೇ ಆದ ಸಾಮರ್ಥ್ಯಗಳಿವೆ, ದೌರ್ಬಲ್ಯಗಳಿವೆ. ಮನುಷ್ಯ ಪ್ರಕೃತಿಯ ಅನುಸಾರವಾಗಿ ನಡೆದುಕೊಳ್ಳಲು ಇರುವ [...]
Posted by: uniquesupri on: February 27, 2008
ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನನ್ನು ತನ್ನದೇ ಕ್ರೂರತೆ, ದೌರ್ಬಲ್ಯಗಳಿಂದ ರಕ್ಷಿಸುವ ಕೋಟೆಯಿದ್ದಂತೆ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್.
ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?
ವ್ಯವಸ್ಥೆಯು ಮನುಷ್ಯನ ಸಮಗ್ರವಾದ ಅಭಿವ್ಯಕ್ತಿಗೆ ತೊಡಕಾಗುತ್ತದೆಯೇ ಇಲ್ಲವೇ ಎಂದು ಚರ್ಚಿಸುವ ಮೊದಲು ವ್ಯವಸ್ಥೆಯ ಹುಟ್ಟಿಗೆ ಕಾರಣವಾದ ಸಂಗತಿಗಳನ್ನು ಗಮನಿಸೋಣ. ಈ ಭೂಮಿಯ ಮೇಲಿರುವ ಯಾವ ಪ್ರಕ್ರಿಯೆಗಳನ್ನೇ ಗಮನಿಸಿ, ಅಲ್ಲಿ ವ್ಯವಸ್ಥೆಯೆಂಬುದು ಎದ್ದು ಕಾಣುತ್ತದೆ. ಇಡೀ ವಿಶ್ವ ನಡೆಯುತ್ತಿರುವುದು ಅಗೋಚರವಾದ ವ್ಯವಸ್ಥೆಯ ಮೇಲೆ. ಸೂರ್ಯನ ಸುತ್ತ ಗ್ರಹಗಳು ವ್ಯವಸ್ಥಿತವಾಗಿ ಸುತ್ತುಹಾಕುತ್ತಿರುವುದರಿಂದಲೇ [...]
Posted by: uniquesupri on: February 27, 2008
ಈ ಲಲಿತ ಪ್ರಬಂಧದ ಲೇಖಕರು ಸುಪ್ರೀತ್.ಕೆ.ಎಸ್
ಆಗಿನ ನಮ್ಮ ಬದುಕಿನ ಸ್ಥಿತಿಯೇ ವಿಚಿತ್ರವಾಗಿರುತ್ತಿತ್ತು. ನಾಡು ಹೋಗು ಎನ್ನುವ ಹಾಗೂ ಕಾಡು ಬಾ ಎನ್ನುವ ಸ್ಥಿತಿಯಂಥದ್ದೇ. ಆದರೆ ಇಲ್ಲಿನ ವ್ಯತ್ಯಾಸ ಅಂದರೆ ನಾವು ಬಂದದ್ದು ನಮ್ಮೂರುಗಳಿಂದ ಈ ಮಾಯಾನಗರಿಗೆ. ಊರಿನಲ್ಲಿ ಉಂಡುಟ್ಟು ಕುಣಿದಾಡಿದ ಮನೆ ಬಿಟ್ಟು ಅಬ್ಬೇಪಾರಿಯಂತೆ ಕೆಲಸ ಅರಸಿಕೊಂಡು ಈ ಊರು ಸೇರಿಕೊಂಡಿದ್ದೆವು. ನಮ್ಮಂತಹ ನಾಲ್ಕಾರು ಅಬ್ಬೇಪಾರಿಗಳು ಸೇರಿ ಈ ಭಯಂಕರ ರಾಕ್ಷಸನಂತಹ ನಗರಿಯಲ್ಲಿ ಪುಟ್ಟದೊಂದು ರೂಮು ಮಾಡಿಕೊಂಡು, ಮನೆಯಿಂದ ತಂದಿದ್ದ ದುಡ್ಡನ್ನು ದಿನಕ್ಕೆರಡು ಬಾರಿ ಎಣಿಸಿಕೊಂಡು ಪಂಚೆಯ [...]
Posted by: uniquesupri on: February 25, 2008
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದವರು ಶ್ರೇಯಸ್.ಕೆ.ಎಂ
ಪ್ರೀತಿ ಎನ್ನುವುದು ಒಂದು ಉನ್ನತವಾದ ಭಾವನೆ. ಅದನ್ನು ಯಾವುದೇ ರೀತಿಯಲ್ಲಿ define ಮಾಡಹೊರಟರೂ ನಮ್ಮ ವ್ಯಾಖ್ಯಾನ ಕುರುಡನೊಬ್ಬನು ಆನೆಯನ್ನು ಕುರಿತು ದೊಡ್ಡ ಕಂಬ ಅಂತ ವರ್ಣಿಸಿದ ಹಾಗಾಗುತ್ತೆ. ಪ್ರೀತಿಯನ್ನು ಬದಿಗಿಟ್ಟು ಇಂದಿನ ಪ್ರೇಮಿಗಳನ್ನು ನೋಡಿದರೆ ಏನೋ ಒಂದು ರೀತಿಯ ಜಿಗುಪ್ಸೆ, ತಿರಸ್ಕಾರ ಮೂಡುತ್ತದೆ. ‘ಪ್ರೀತಿ ಅಂದರೆ ಇಷ್ಟೇನಾ…?’ ಅನ್ನೋ ಪ್ರಶ್ನೆಯನ್ನು ಕೇಳಿಕೊಂಡಾಗ, ಅವರ ಹುಚ್ಚುತನವನ್ನು ಅವಲೋಕಿಸಿದಾಗ, ಪ್ರೀತಿಸಿದವರೆಲ್ಲರೂ ಚಿಕ್ಕವರಾಗಿ ಕಾಣುತ್ತಾರೆ. ಕೆಲವು ಪ್ರೇಮಕಥೆಗಳನ್ನು ಕೇಳಿದಾಗಲಂತೂ ನಗಬೇಕೋ ಅಳಬೇಕೋ ಗೊತ್ತಾಗುವುದೇ [...]
Posted by: uniquesupri on: February 25, 2008
ತಮ್ಮ ಲಹರಿಯಲ್ಲಿ ಬಂದ ಆಲೋಚನೆಗಳನ್ನು ಹರಿಬಿಟ್ಟಿದ್ದಾರೆಸುಪ್ರೀತ್.ಕೆ.ಎಸ್
‘ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು’ ಎನ್ನುವ ಮಾತನ್ನು ನಾವು ಅನೇಕ ವೇಳೆ ಕೇಳಿರುತ್ತೇವೆ. ಹಾಗೆಂದರೆ ಏನು? ಆರ್ಥಿಕವಾಗಿ ನಾವು ಸ್ವತಂತ್ರರಾಗುವುದಾ? ಹಣಕ್ಕಾಗಿ ಇನ್ನೊಬ್ಬರನ್ನು ಆಶ್ರಯಸುವುದನ್ನು ಬಿಡುವುದಾ? ಅಷ್ಟು ದಿನಗಳ ಕಾಲ ಅಪ್ಪ ದುಡಿಯುವ ದುಡ್ಡಿನಲ್ಲಿ ನಮ್ಮ ಆವಶ್ಯಕತೆಗಳನ್ನು ತೀರಿಸಿಕೊಳ್ಳುತ್ತಿರುತ್ತೇವೆ, ನಮ್ಮ ಶಾಲೆ-ಕಾಲೇಜಿನ ಫೀಸು, ನಮಗೆ ಬೇಕಾಗುವ ಪುಸ್ತಕ, ಬಟ್ಟೆ-ಬರೆ, ಪಾಕೆಟ್ ಮನಿ ಎಲ್ಲಕ್ಕೂ ನಾವು ತಂದೆ ತಾಯಿಯನ್ನು ಎದುರುನೋಡುತ್ತೇವೆ. ಹಾಗಾಗಿ ನಮ್ಮ ಕಾಲ ಮೇಲೆ ನಾವು ನಿಲ್ಲುವುದು ಎಂದರೆ ನಾವೇ [...]
Posted by: uniquesupri on: February 25, 2008
ಕೆಲವು ಸಲ ಹಾಗಾಗುತ್ತದೆ. ಮನಸ್ಸಲ್ಲಿ ಹುಟ್ಟಿದ ಭಾವಕ್ಕೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಕೊಡದಿದ್ದರೆ ಅದು ಒಳಗೊಳಗೇ ನಮ್ಮನ್ನು ತಿನ್ನತೊಡಗುತ್ತದೆ. ಅಂಥದ್ದನ್ನು ಒಮ್ಮೆ ಹೊರಗೆಡವಿಬಿಟ್ಟರೆ ಮನಸ್ಸಿಗೆ ನಿರಾಳ. ‘ನೆನೆಯದೆ ಇರಲಿ ಹ್ಯಾಂಗ…?’ ಎನ್ನುತ್ತಾರೆ ‘ಅಂತರ್ಮುಖಿ’.
ವೈಯಕ್ತಿಕ ಕೆಲಸಕ್ಕೆ ಸಂಬಂಧಿಸಿದಂತೆ ದಾವಣಗೆರೆಗೆ ಹೋಗಬೇಕಿತ್ತು. ಬೆಂಗಳೂರಿನಿಂದ ದಾವಣಗೆರೆಗೆ ಬಸ್ಸು ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗದ ಮಾರ್ಗವಾಗಿ ಹೋಗುತ್ತದೆ. ಶಿರಾದಲ್ಲಿ ಟೀ, ಕಾಫಿಗಾಗಿ ಹದಿನೈದು ನಿಮಿಷ ವಿರಾಮವಿರುತ್ತದೆ. ತಿಂಡಿ, ಕಾಫಿಯ ಆವಶ್ಯಕತೆಯಿರುವವರು, ಜಲಬಾಧೆ ತೀರಿಸುವ ಅನಿವಾರ್ಯತೆ ಇರುವವರು ಶಿರಾ ಯಾವಾಗ ಬರುತ್ತದೋ ಎಂದು ಕಾಯುತ್ತಿರುತ್ತಾರೆ. ಬಸ್ಸು [...]
Posted by: uniquesupri on: February 25, 2008
ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’. ಈ ಸಂಚಿಕೆಯ ಅಂಕಣದಲ್ಲಿ ‘ಅಂತರ್ಮುಖಿ’ ತಮ್ಮ ಬೈಕ್ ಕಲಿಕೆಯ ರಸವತ್ತಾದ ಅನುಭವವನ್ನು ಅಕ್ಷರಗಳಲ್ಲಿ ಕಡೆದಿರಿಸಿದ್ದಾರೆ.
ಬೈಕು ಓಡಿಸುವುದು ತುಂಬಾ ಸುಲಭ ಅಂದುಕೊಂಡಿದ್ದೆ. ಪ್ರೈಮರಿ ಸ್ಲೂಲಿನಲ್ಲಿರುವಾಗಲೇ ಸೈಕಲ್ ಹೊಡೆಯುವುದನ್ನು ಕಲಿತುಕೊಂಡಿದ್ದೆ. ಅನಂತರ ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆಯೇ ಗೇರ್ ಇಲ್ಲದ, [...]
Posted by: uniquesupri on: February 25, 2008
ಆತ್ಮೀಯ ಗೆಳೆಯಾ,
ಇನ್ನೇನಂಥ ಕರೆಯಲಿ ನಿನ್ನ? ನಮ್ಮ ಸಂಬಧಕ್ಕೆ ಇದಕ್ಕಿಂತ ಸೂಕ್ತವಾದ ಯಾವ ಹೆಸರನ್ನು ತಾನೆ ಇಡಲು ಸಾಧ್ಯ? ಹೀಗೆ ಸಂಬಂಧಗಳಿಗೆ ಹೆಸರಿಡುವ ಚಾಳಿಗೆ ಏನನ್ನ ಬೇಕು? ಎಲ್ಲಕ್ಕೂ ನಾವು ಹೆಸರಿಟ್ಟು, ಚೌಕಟ್ಟು ಹಾಕಿ ಹರಿವನ್ನು ನಿಲ್ಲಿಸಿಬಿಡಲು ಏಕೆ ಹವಣಿಸುತ್ತೇವೆ? ಕಣ್ಣೆದುರು ಇರುವ ನಿತ್ಯ ಹಸಿರಾದ ಜೀವನಕ್ಕಿಂತ ನಮಗೆ ಚೌಕಟ್ಟು ಹಾಕಿರಿಸಿದ ಫೋಟೊ ಏಕೆ ಇಷ್ಟವಾಗುತ್ತೆ? ಸದಾ ಹರಿಯುತ್ತಲೇ, ಸದಾ ಬದಲಾಗುತ್ತಲೇ ಇರುವ ನೀರಿನ ಹರಿವಿಗೆ ನದಿ ಅಂತ ಹೆಸರಿಟ್ಟು ಬಿಡಬಹುದೇ? ಮರ ಅಂತ ನಾವು ಕರೆದ ಭೌತಿಕ [...]
Posted by: uniquesupri on: February 25, 2008
ಇಂಥದ್ದೊಂದು ಪತ್ರವನ್ನು ನೀವು ಯಾರಿಗೂ ಬರೆದಿರಲಾರಿರಿ. ಯಾರಿಂದಲೂ ಪಡೆದಿರಲಾರಿರಿ. ಇಂತಹ ಪತ್ರ ಸಿಗುವುದು ಇಲ್ಲಿ ಮಾತ್ರ.ಇದು ‘ ಹೀಗೊಂದು ಪತ್ರ’. ಪ್ರೀತಿಯ ಬಗ್ಗೆ ಎಲ್ಲರೂ ಪುಟಗಟ್ಟಲೆ ಬರೀತಾರೆ. ಆದರೆ ಪ್ರೀತಿಗೂ ಮಾತನಾಡೋಕೆ ಏನಾದರೂ ಇದೆಯೇ?
ಹೀಗೆ ನಾನು ಪತ್ರ ಬರೆಯುತ್ತಿರುವುದು ಇದೇ ಮೊದಲು. ನಿನಗೆ ಆಶ್ಚರ್ಯವಾಗಬಹುದು, ನನಗೂ ಮಾತನಾಡುವುದಕ್ಕೆ ಇದೆಯಾ ಅಂತ ನಿನಗೆ ಅಚ್ಚರಿಯಾಗಬಹುದು. ನಾನು ಏನು, ನಾನು ಹೇಗಿದ್ದೇನೆ, ನನ್ನ ವ್ಯಾಪ್ತಿ ಏನು ಎಂಬುದರ ಬಗ್ಗೆ ಇದುವರೆಗೇ ನೀನು ದಣಿವಿಲ್ಲದೆಯೇ ಮಾತನಾಡಿದ್ದೀಯ ಈಗ ನನಗೂ ಹೇಳಿಕೊಳ್ಳುವುದಕ್ಕೆ, ವಿವರಿಸಿಕೊಳ್ಳುವುದಕ್ಕೆ, [...]
Recent Comments